ಹೌದು ಇದು ಆಶ್ಚರ್ಯವೆನಿಸಿದರೂ ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520. ಇವನ ಆಳ್ವಿಕೆಯಲ್ಲಿಯೇ ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ 'ಎ ಫರ್ ಗಾಟನ್ ಎಂಪೈರ್' ಪುಸ್ತಕದಲ್ಲಿ ಹಂಪಿ ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.
ಈ ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ ತೆಗೆದದ್ದು. ಈ ನಡುವೆ 1986ರವರೆಗೆ ಅಂದರೆ ಯುನೆಸ್ಕೋ ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು ಎಂಬುದು ಅವರವರ ಊಹೆಗೆ ಬಿಟ್ಟದ್ದು. ಅಂದಹಾಗೆ ನವೆಂಬರ್ 3ರಿಂದ 5ರವರೆಗೆ 'ಹಂಪಿ ಉತ್ಸವ' ನಡೆಯುತ್ತಿದ್ದೆ ಅಲ್ಲಲ್ಲ 'ಗಣಿ ಉತ್ಸವ' ನಡೆಯುತ್ತಿದೆ.
7 comments:
ಅದ್ಭುತ ಅನಾವರಣ! ವಿಜಯ ವಿಠ್ಠಲ ದೇವಾಲಯದಲ್ಲಿ ನೆಲೆಸಲು ಪಂಢರಾಪುರದಿಂದ ಪಾಂಡುರಂಗನನ್ನೂ ಕರೆದು ತಂದಿದ್ದರಂತೆ. ದೊಡ್ಡ ದೇಗುಲವಿದ್ದರೇನು ದನ, ಜನ ಇಲ್ಲದ್ದು ನೋಡಿ ವಿಠ್ಠಲ ಓಡಿಹೋದನಂತೆ. ಜನಪದದಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ. ಅಂದಹಾಗೆ ಹಂಪಿ ಉತ್ಸವದಲ್ಲಿ ಇಂತಹ ಅಮೂಲ್ಯ ವಿಷಯಗಳನ್ನು ಪ್ರಸ್ತಾಪಿಸುವವರು ಕಂಡುಬರುವುದು ಸಾಧ್ಯವೇ? ಗಣಿಕೆಯರ ಓಣಿಯೂ ಇತ್ತಂತೆ! ಗಣಿಧಣಿಗಳು ಈಗಿನ ಉತ್ಸವದಲ್ಲಿ ಏನೇನು ಹೊಸ ಆವಿಷ್ಕಾರಗಳನ್ನು ಹೊರಗೆಡಹುತ್ತಾರೋ, ವಿಠ್ಠಲನೇ ಬಲ್ಲ!
ಚಿತ್ರಗಳನ್ನು ನೋಡಿ ಬೇಸರವಾಯಿತು :-(
ನಾವು ನಮ್ಮಲ್ಲಿರುವ ಇಂಥ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳಲಾಗದಿದ್ದುದಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು..
ವ್ಹಾ! ಎಷ್ಟು ಚೆನ್ನಾಗಿ ಕಾಣುತ್ತಿದೆ ಗೋಪುರವಿದ್ದಾಗ. ಗೊತ್ತೇ ಇರಲಿಲ್ಲ ನೋಡಿ. ತಿಳಿಸಿದ್ದಕ್ಕಾಗಿ ವಂದನೆಗಳು. ಆ ಕಪ್ಪು ಬಿಳುಪು ಚಿತ್ರವಂತೂ ಬಹಳ ಆಕರ್ಷಣೀಯ.
Recently I had heard about the tower of the stone charriot from M P Prakash when we were having an informal chat at Karnataka Bhavan in Delhi. He was speaking about this stone charriot and about the book A forgotton Empire very passionately. He has also promised to send a copy of the book. But now when I saw the photo in your blog, I was really surprised by its beauty. Its really fentastic. Is that book available in the market? If yes, please give the details. Hope to see more such photos in your blog.
-Shiva Prasad T R, Bureau Chief, TV9, New Delhi.
ಸುಮಾರು ದಿನಗಳಾಯ್ತು ಮಾರಾಯ ನಿನ್ನ ನೋಡಿ. ಬೆಂಗಳೂರಿಗೆ ಯಾವಾಗ ಬರುವೆ ತಿಳಿಸು. ಮತ್ತೆ forgotton Empire ಬುಕ್ ಸ್ವಪ್ನದಲ್ಲಿ ಸಿಗಬಹುದು. ನಾನು ಹಂಪಿಗೆ ಹೋದಾಗ ತೆಗೆದುಕೊಂಡಿದ್ದು. ಅಂದಹಾಗೆ ನಾನು ಮುಂದಿನ ತಿಂಗಳು ಮೂರುದಿನದ ಸೆಮಿನಾರ್ ಗೆ ಹಂಪಿಗೆ ಹೋಗೋದಿದೆ ನಿನಗೆ ಬುಕ್ ಕೊರಿಯರ್ ಮಾಡುವೆ ಬಿಡು.
ಒಹ್ ಅದ್ಭುತ ಸರ್... ನಿಜಕ್ಕೋ ತುಂಬಾ valuable information.
ಕಥೆ ಹೀಗಿತ್ತು ಅಂತ ನಿಜಕ್ಕೋ ತಿಳಿದಿರಲಿಲ್ಲ ಸರ್.. ನನಗೇನು ಅನ್ಸುತ್ತೆ ನಮ್ಮ ಪೀಳಿಗೆಯ ಎಷ್ಟೊಂದು ಜನಕ್ಕೆ ತಿಳ್ದೆ ಇಲ್ಲ ಅಂತ..
'ಎ ಫರ್ಗಾಟನ್ ಎಂಪೈರ್' ಪುಸ್ತಕದ ಬಗ್ಗೆ ಭೈರಪ್ಪನವರ ಆವರಣದಲ್ಲಿ ಓದಿದ್ದೆ. ಈಗ ತಿಳಿತು.. ಅದೊಂದು ಒಳ್ದಲೇ ಬೇಕಾದ ಪುಸ್ತಕ ಅಂತ..
ಸ್ವಪ್ನ ಬುಕ್ ಸ್ಟಾಲಿಗೆ ಓಗ್ತಾ ಇದ್ದೆನಿ.. ಪುಸ್ತಕ ಓದಿ ನಂತರ ನಿಮಗೆ Comments ಬರಿತೆ.
ನಿಮ್ಮ
ಅವೀನ್
hi
all please see this year 2010 calender which is bought by Karnataka Tourism Department. you can also see some photo from www.krishnadevaraya.in
Naveen.B
Post a Comment