ಉಸ್ಸ್... ಉಸ್ಸ್...
ಲಯಬದ್ದ ಉಸಿರಾಟಕ್ಕೆ
ಎದೆಯ ಸೆರಗು ಇಷ್ಟಿಷ್ಟೇ-
ಅಷ್ಟೂ ಜಾರಿದೆ
ದಾರಿಹೋಕರ ಕಣ್ಣು ರುಚಿಗೆ
ಎದೆಯ ಸೀಳು ಸಿಕ್ಕಿದೆ!
ಉಪ್ಪ್... ಉಪ್ಪ್...
ಲಯಬದ್ದ ಹೊಗೆತಕ್ಕೆ
ಮರ್ಯಾದೆಯ ಒಳಲಂಗ
ಮೊಣಕಾಲ ದಾಟಿದೆ
ಕೈ ತುಂಬಾ ನಡೆದಿದೆ
ನೀರಿನ ಚೆಲ್ಲಾಟ !
ಬುಸ್ಬುಸ್ ನೊರೆಯೊಂದಿಗೆ
ಆಡಿದ ಸೋಪು
ಜಾರಿದೆ
ಅಂತೂ ಇಂತೂ
ಕೊಳೆಯೂ ಮಾಯವಾಗಿದೆ...!
ಬಿಗಿದು ಕಟ್ಟಿದ ತಂತಿ ಮೇಲೆ
ತೊಳೆದ ಬಟ್ಟೆಗಳು ಹಾರಾಡುತ್ತಿವೆ
ಅವುಗಳಿಗೆ
ಎಷ್ಟೊಂದು ಬಣ್ಣ, ಎಷ್ಟೊಂದು "ಮಡಿ"ಕೆ!
-ಪಿ. ಮಂಜುನಾಥ
3 comments:
ಆಹಾ ಚಿತ್ರವೇ! ಮೈ ಚಳಿ ಬಿಟ್ಟು ಬರೆದಿದ್ದೀರಿ.
ಅಧ್ಬುತ.. ನೀವು ನಿಜಕ್ಕು ಕವಿ ..
ಸಿದ್ಧು ನಿಮ್ಮನ್ನು ’ಕವಿ ’ ಎಂದು ಬೈದಾಯಿತು. ಇನ್ನು ನೀವು ಉದ್ಧಾರವಾಗೋಲ್ಲ.
ಕವಿಸ್ವಾತಂತ್ರ್ಯ ಅನ್ನೋದು ಇರುತ್ತೆ ಆದರೆ ಕಾಗುಣಿತದಲ್ಲಲ್ಲ. ಅದು ಒಗೆತ... ಹೊಗೆತ ಅಲ್ಲ ಅನಿಸುತ್ತೆ. ಸರಿ ಅನಿಸಿದ್ರೆ ಹಾಗೆ ಉಳಿಸಿಕೊಳ್ಳಿ.ಇಲ್ಲದಿದ್ರೆ ಈ ಕಾಮೆಂಟ್ ಮಾತ್ರ ಉಳಿಸಿಕೊಳ್ಳಿ.
ಕವನ ಇಷ್ಟವಾಯಿತು.
ಎಂಥ ಅದ್ಭುತ ಗ್ರಹಿಕೆ.
ಅದೆಷ್ಟು ಹೊತ್ತು ಅಲ್ಲೇ ನಿಂತಿದ್ರೋ... :-)
Post a Comment