ಬಾರಕ್ ಹುಸೇನ್ ಒಬಾಮಾನನ್ನು ಗೆಲ್ಲಿಸಿ ಪ್ರಜಾಪ್ರಭುತ್ವದ ಬಲುದೊಡ್ಡ ವಿಜಯಕ್ಕೆ ಕಾರಣರಾದ ಅಮೇರಿಕದ ಜನತೆಗೆ ನಿಸಾರ್ ಬರೆದ ಅಮೇರಿಕ, ಅಮೇರಿಕ ಪದ್ಯ ಸಾಲುಗಳಿಂದ ನಮಿಸುತ್ತೇನೆ.
ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ
ನಿನ್ನವರ ಟೈ ಸೂಟು ಸ್ಕರ್ಟುಗಳನೊಂದೊಂದೆ ಕಳಚಿ, ನೆತ್ತರಿನಿಂದ
ಸ್ಪ್ಯಾನಿಶರ ಜರ್ಮನರ ಫೋರ್ಚುಗೀಸಾಂಗ್ಲ ನೀಗ್ರೋಗಳ
ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ
ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ-
ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡು
ನುಡಿ ಎಡವಿ ಕೈಮುಗಿದು ಬೆಪ್ಪಗಾಗುತ್ತೇನೆ..
2 comments:
manjunat swamigale hoogar mado namskar. navella soukhya, neevu soukhyana? nimm halli kannada nodi tumba khusi aytu. halli kannadadalli desi samvedane haasu hokkirutte. taavu haako kannadakad hinde aa halli kannada irodu hemme ansutte. laxman hoogar
ಒಬಾಮಾ ಗೆಲುವು ದೂರಗಾಮಿ ಪರಿಣಾಗಳಿಗೆ ನಾಂದಿ ಹಾಡಿದೆ. ವಿಶ್ವದಾದ್ಯಂತ ಯುವ ನಾಯಕರ ಪಡೆ ಹುಟ್ಟಿಕೊಳ್ಳಲಿದೆ.
ಯುವಕರು ಬಂದರು ದಾರಿಬಿಡಿ,
ಯುವಕರ ಕೈಗೆ ರಾಜ್ಯ ಕೊಡಿ
ಎಂದು ಹಾಡುವ ಕಾಲ ದೂರವಿಲ್ಲ.
ಜೈ ಒಬಾಮ.
ಬೇದ್ರೆ ಮಂಜುನಾಥ
Post a Comment