Wednesday, September 10, 2008

ಇದಪ್ಪಾ ವರಸೆ ಅಂದರೆ...ದು ಜೋಗಿಯವರ ಎರಡು ಕೃತಿಗಳ ಬಿಡುಗಡೆ ಸಮಾರಂಭ. ಒಂದು ಯಾಮಿನಿ ಕಾದಂಬರಿ. ಮತ್ತೊಂದು ಕಥಾ ಸಂಕಲನ. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ ಯವರು ಇತ್ತೀಚೆಗೆ ಬಿಡುಗಡೆಯಾದ ಕಪಿಲ್ ಸಿಬಲ್ ರವರ ಕವನ ಸಂಕಲನವನ್ನು ಯಾವುದೋ ಮಾತಿಗೆ ಉದಾಹರಿಸಿದರು. ಎಸ್ಎಮ್ಎಸ್ ನಲ್ಲಿ ಏನೋ ತೋಚಿದ್ದನ್ನ ಬರೆದು ಕವಿತೆ ಅಂತ ಪ್ರಿಂಟ್ ಮಾಡಿ ದೊಡ್ಡ ಹೊಟೇಲ್ ನಲ್ಲಿ ಬಿಡುಗಡೆ ಮಾಡಿದರು. ಆತ ಮಂತ್ರಿ ಎನ್ನೋ ಕಾರಣಕ್ಕೆ ಕೆಲ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟ ಮಾಡಿದವು ಎಂದು ಟೀಕಿಸಿದರು.

ಅವರ ಟೀಕೆಗೆ ಒಂದಿಷ್ಟು ಬೆಲೆ ಇದೆ. ಅದೇ ಕಾರ್ಯಕ್ರಮದ ಕೊನೆಯಲ್ಲಿ ಪತ್ರಕರ್ತ ರವಿ ಬೆಳಗೆರೆ ಮಾತಾಡ್ತಾ ಅನಂತಮೂರ್ತಿಯವರ ಅಭಿಪ್ರಾಯವನ್ನು ಒಪ್ಪುತ್ತಾ, ಮುಖಪುಟದಲ್ಲಿ ಸಿಬಲ್ ಕವನಸಂಕಲನದ ಬಗ್ಗೆ ಪ್ರಕಟಿಸಿದ ಪತ್ರಿಕೆಗಳ ಬಗ್ಗೆ ಕಿಡಿಕಾರುತ್ತಾ 'ಈ ಪತ್ರಕರ್ತರನ್ನೆಲ್ಲ ಮೆಟ್ಟಿನಾಗೆ ಹೊಡೀಬೇಕು' ಎಂದು ಫರ್ಮಾನು ಹೊರಡಿಸಿದರು!

ಮಾತು ಮುಂದುವರಿಸಿ ಬಬ್ಲೂ ಶ್ರೀವಾಸ್ತವ ಎಂಬ ರೌಡಿ ಕಂ ರಾಜಕಾರಣಿಯ ಬರಹಗಳನ್ನು ಉದಾಹರಿಸಿದರು. ಅದೇನೋ ಮಹಾಕೃತಿ ಎಂಬಂತೆ ಮತ್ತೊಬ್ಬರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನಾನು ತರಿಸಿ ಓದಿದೆ. ಅದರಲ್ಲಿ ಏನೂ ಇಲ್ಲ. ಆ ಮನುಷ್ಯ ಭೂತಗ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗ ಇತರರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳ ಸಂಗ್ರಹ ರೂಪ. ಅದೂ ಒಂದು ಕೃತಿಯೆ ಎಂದು ರವಿ ಮೂದಲಿಸಿದರು. ಇದಪ್ಪಾ ವರಸೆ ಅಂದರೆ. ಕಪಿಲ್ ಸಿಬಲ್ ಕವನ ಸಂಕಲನ ಸುದ್ದಿ ಮುಖಪುಟ್ಟಕೆ ಹಾಕ್ಕೊಂಡವರಿಗೆ ಮೆಟ್ಟಿನಾಗೆ ಹೊಡೆಯೋದೆ ಆದರೆ, ಪ್ರತಿ ವಾರ ಪತ್ರಿಕೆ ಮುಖಪುಟದಲ್ಲಿ ರೌಡಿಗಳನ್ನು, ಸರಣಿ ಹಂತಕರನ್ನ, ಪಾತಕಿ, ಪರಮ ಪಾಪಿಗಳನ್ನು ವಿಜೃಂಭಿಸೋರನ್ನ ಹೊಡೆಯೋಕೆ ಏನನಪ್ಪಾ ತರೋದು? ಪ್ರತಿರಾತ್ರಿ ಮಕ್ಕಳು ಚೆಂದಗೆ ಚಂದಮಾಮ ನೋಡ್ಕೋತಾ ನಿದ್ರಗೆ ಜಾರೋ ಹೊತ್ತಲ್ಲಿ ಅಸಡ್ಢಾಳ ದನಿಯೊಂದಿಗೆ ಇವತ್ತೊಂದು ಇಂಟರೆಸ್ಟಿಂಗ್ ಎಪಿಸೋಡ್ ತಂದಿದೀನಿ.. ಎನ್ನುತ್ತಾ ಪಾಪಿಗಳ ಲೋಕಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗುವವರನ್ನು ಹೊಡೆಯೋಕೆ ಏನನಪ್ಪಾ ತರೋದು? ಹೋಗಲಿ, ಕಪಿಲ್ ಸಿಬಲ್ ಕವನಗಳು, ಅವು ಜಾಳು ಜಾಳು ಎಸ್ಎಮ್ಎಸ್ ಗಳೇ ಇರಬಹುದು, ಪತ್ರಿಕೆ ಮುಖಪುಟದಲ್ಲಿ ಕಾಣಿಸಿಕೊಂಡರೆ ಯಾರ ಮನಸಿನಲ್ಲೂ ಕ್ರೌರ್ಯ ಹುಟ್ಟಲ್ಲ ಅನ್ನೋದಂತೂ ಸತ್ಯ. ಅಬ್ಬಬ್ಬಾ ಅಂದ್ರೆ, ಇವಯ್ಯಂಗೆ ಇಷ್ಟೊಂದು ಪ್ರಚಾರ ಅಗತ್ಯ ಇರಲಿಲ್ಲ ಅಂದ್ಕೋಬೋದು ಓದುಗ ದೊರೆ ಅಷ್ಟೆ.

ಅನಂತಮೂರ್ತಿಯವರು ಮಾತನಾಡಿದ್ದಕ್ಕೆ, ಅವರ ಅಭಿಪ್ರಾಯ ಮಂಡಿಸಿದ ರೀತಿಗೆ ಘನತೆ ಇದೆ. ಮುಖ್ಯವಾಗಿ ಅವರು ಬರಹಗಾರ. ಕಪಿಲ್ಸಿಬಲ್ ಪುಸ್ತಕಕ್ಕೆ ಸಿಕ್ಕಿರೋ ಪ್ರಚಾರದ ಬಗ್ಗೆ ಬೇಸರ ಇಟ್ಕೊಂಡು ಆ ಮಾತನಾಡಿದ್ದಾರೆ. ಅವರು ಅಭಿಪ್ರಾಯ ಮಂಡಿಸುವಾಗ ಎಲ್ಲಿಯೂ ಉದ್ವೇಗಕ್ಕೆ ಒಳಗಾಗಲಿಲ್ಲ. ಆದರೆ ರವಿ ಹಾಗಲ್ಲ. ಒಂದೇ ಮಾತಿಗೆ ಮೆಟ್ಟಿನಾಗೆ ಹೊಡೀಬೇಕು ಎನ್ನೋದಾದರೆ, ಆತನ ಮನಸ್ಥಿತಿ ಎಂಥದು? ತಾನು ಸದಾ ಬರೆಯುವ, ಸದಾ ಚಿಂತಿಸುವ ಹಾಗೂ ಆಗಾಗ ತೆರೆ ಮೇಲೆ ನಟಿಸುವ ಪಾತ್ರಗಳ ಪ್ರಭಾವ ಹೀಗೆ ಮಾತನಾಡಿಸಿತೆ? ರವಿಯ ಬರವಣಿಗೆ ಹಾಗೂ ಆತನ ಟಿವಿ ಕಾರ್ಯಕ್ರಮಗಳಿಗಾಗಿ ಯಾವುದರಿಂದಲೂ ಆತನನ್ನು ಹೊಡೆಯುವ ಮೂಲಕ ತಿರಸ್ಕಾರವನ್ನು ವ್ಯಕ್ತಪಡಿಸುವುದು ಹೇಗೆ ಸರಿ ಅಲ್ಲವೋ... ಹಾಗೆಯೇ ತನ್ನ ವೃತ್ತಿಬಾಂಧವರ ಬಗ್ಗೆ ತುಂಬಿದ ಸಭೆಯಲ್ಲಿ ಹೀಗೆ ಮಾತನಾಡುವುದೂ ತರವಲ್ಲ.

14 comments:

Anonymous said...

illama said...

ravi belagere maathanadida haage ananthamurthy matanadiddare...?
kela patrikegalu nalku puta hechhu print madsi odugarinda sms tarisi jhadisi baredirorou.
ade obba rajakarani haage maatanadiddare...?
ella patrikegalu 'ee rajakaranige adeshtu dhimaku' anta raddhantha madiroru.
adre, ravi belagere maatanadiddu teekege guriyagale illa.

Anonymous said...

ಮಂಜುನಾಥ ಸ್ವಾಮಿಯವರೇ,
ರವಿ ಬೆಳಗೆರೆ ಸಾಹೇಬರು ಬೆಂಗಳೂರು ಅಂಡರ್‌ವರ್ಲ್ಡ್‌ನ ಕಥೆಗಳನ್ನು ಹೊಸೆದು ಹೊಸೆದು, ಸಣ್ಣ ಪುಟ್ಟ ರೌಡಿಗಳನ್ನು ವಿಜೃಂಭಿಸಿ ಸಾಕಾಗಿ ಮುಂಬೈ ಅಂಡರ್‌ವರ್ಲ್ಡ್‌ಗೆ ಗಂಟುಬಿದ್ದಿದ್ದಾರೆ.
ಇನ್ನು ಅವರ ಹಾಯ್ ಬೆಂಗಳೂರಿನಲ್ಲಿ ಮುಂಬೈ ಅಂಡರ್‌ವರ್ಲ್ಡ್ ಸಾಮ್ರಾಜ್ಯ ಮಾತನಾಡುತ್ತದೆ. ಅವರೇ ಫರ್ಮಾನು ಕೊಟ್ಟಂತೆ ಸನ್ಯಾನ್ಯರಿಗೆ ಮೆಟ್ಟಲ್ಲಿ ಹೊಡೆಯಲು ಸಾಧ್ಯವೇ? ಬೇಡ ಬಿಡಿ, ಏನೋ ಆವೇಶದಲ್ಲಿ ಮಾತನಾಡಿದ್ದಾರೆ. ಆ ಭೂಗತ ಲೋಕೇಶ್ವರ ಅವರಿಗೆ ಒಳ್ಳೆಯದನ್ನು ಮಾಡಲಿ.
-ಸೌರಭ

Anonymous said...

ಇಂತದ್ದೊಂದು ಮಾತಾಡಿ ಅವರಿಗೆ ಅರಗಿಸಿಕೊಳ್ಳಲು ಸಭೆಯಲ್ಲಿದ್ದ ಅಥವಾ ಉಳಿದ ಪತ್ರಕರ್ತರು ಬಿಟ್ಟಿದ್ದಾದರೂ ಹೇಗೆ!

ಅವರ ಪೊಸಿಷನ್ನು, ಹೋಲ್ಡ್ ಹಾಗಿದೆ!

Anonymous said...

ಗುಡ್ ಲಕ್ ಸ್ವಾಮಿ. ಯಾರೂ ತಟ್ಟದ್ದನ್ನ ಥಟ್ಟಂತ ಬ್ಲಾಗ್ ನಲ್ಲಾದರೂ ಹಾಕಿ ಕಣ್ತೆರೆಸುವ ಕೆಲಸ ಮಾಡಿದ್ದೀರಿ. ಮುಂದೊಂದು ದಿನ ಈ ಹಳೆಯ ಪಕಳೆಯ ಮುಖಗಳೆಲ್ಲಾ ಶ್ರದ್ಧಾಂಜಲಿ ಬರಹಗಾರರಾಗಿ, ಅವರದೇ ಶ್ರದ್ಧಾಂಜಲಿಗೆ ಬರೆಯುವವರೇ ಇಲ್ಲವಾಗುವ ದಿನವೂ ದೂರವಿಲ್ಲ. ಭವಿಷ್ಯದ ಬರಹಗಾರರಾದ ನೀವೆಲ್ಲಾ ಒಂದಷ್ಟು ಪಾವಿತ್ರ್ಯ ಕಾಪಾಡ್ತೀರಿ ಅನ್ನೋದೇ ನಿಜ.
ಬೇದ್ರೆ ಮಂಜುನಾಥ

Anonymous said...

ಈಗೀಗ ಪತ್ರಕರ್ತರನ್ನು ಹಿರಿಯ ಪತ್ರಕರ್ತರು ಝಾಡಿಸೋದು ಫ್ಯಾಶನ್ನು. ಅಷ್ಟಕ್ಕೆಲ್ಲ ತಲೆಕೆಡಿಸ್ಕೋಬೇಡಿ ಸಾರ್‍:)
-ಕೊಳಲನಾದ

Anonymous said...

Ha ha ha...!
Tumba enjoy madide.
Nanoo idanne baribeku andukondidde.
- Harish Kera

Anonymous said...

Sir,

Ravibelegare matadida sandarbha adara artha nimage adantilla. Sahityakavagi astolle kruthigalannu bareyuva samarthyaviddaru patrakartharaguva anivaryatheya bagge avaru matadiddu. Mettinalli hodeyabekendu avaru itara patrakartarigashte heLalilla thammannu serisikonde heLiddu. Arthavagadiddare anarthavannanthu madabedi, neevu artha madikondashte itararigu arthavagali embanthe bareyabedi...

Anonymous said...

hema madam,
please don't put your words into belagere's mouth. while making a statement he did not include himself as jounralist. All that he said was - "ee patrakartharige mettinage hodibeku". you may look or hear his statement in a different way. But with that his statement, i mean his use of words, will not change.
endorsing ananthamurthy's remarks, all that he said was ... "ee patrakartarige..."
Had he said "nammantha patrakartarige...", i agree your observation is right. But he did not say so.
Many of those who commented to the write up in the blog, were present at the programme. They heard what Ravi said and joined the blog in criticising him for his scathing remark.
i believe whoever filed the post did not show the audacity to claim his reading of Ravi's statement was 'accurate'. but your comment has that audacity.
you are free to view opinions in your own way. But you can't say that others have failed to understand the statement.
- satish, a journalist

Anonymous said...

hudu hudu e ravi belegere maraya Roopinige aids ide antha bardagle yaradru mettnage hodibekittu. aga yaru hodililla adikke avnu bere avrge hodiri antha helthane.
Ravi belegrer heldange nijvaglu pathrakartharige mettnage hodi beku. yakendre. avnantha krimiyanna thamma madye ittkondidare. aatha pathrakartharige mettnage hodibeku andrunoo sumnidaralla... adikke pathrakartharige mettnage hodibeku...
enantiri....

Anonymous said...

ಈ ಸಂಗತಿ ತಿಳಿದಿದ್ದು ನಿಮ್ಮ ಬ್ಲಾಗಿಂದ್ಲೇ. ಥ್ಯಾಂಕ್ಸ್. ನನ್ನ ಮಟ್ಟಿಗೆ ಹೇಳೋದಾದ್ರೆ, ಅನಂತ ಮೂರ್ತಿ, ರವಿ ಬೆಳಗೆರೆ ಇಬ್ರದ್ದೂ ತಪ್ಪೇ. ಅನಂತ ಮೂರ್ತಿ ಕಪಿಲ್ ಸಿಬಲ್ ರ ಕವಿತೆಗಳನ್ನ ಜಾಳುಜಾಳು ಎನ್ನುವ ಮೂಲಕ ತಮಗೆ ಜ್ಞಾನ ಪೀಠ ಸಿಕ್ಕ ಬಗ್ಗೆ ಆಡಿಕೊಳ್ಳುವ ಜನರ ಮೇಲೆ ಜಿದ್ದು ತೀರಿಸ್ಕೊಂಡ್ರಾ ಹೇಗೆ!?
ರವಿ ಬೆಳಗೆರೆಯವ್ರು ಅದೇನೋ ವಾರಸ್ದಾರ ಅಂತ ಮೂವಿ ಮಾಡ್ತಿದ್ರಲ್ಲ, ಆಗ... ಬಾಯ್ ಫ್ರೆಂಡ್ ನಂತಹ ಡಬ್ಬಾ ಫಿಲಂ ಮಾಡ್ವಾಗ್ಲೂ ನಿಮ್ಮ ಕನ್ನಡಪ್ರಭದಲ್ಲಿ ಅವರ ಫೋಟೋನ ಮೇಲೆ - ಶಿರೋನಾಮೆ ಹತ್ರ ಹಾಕ್ತಿದ್ರಲ್ಲ!!?
- ಚೇತನಾ

Anonymous said...

ಯಾರು ಸಾಚಗಳಿಲ್ಲ ಬಿಡಿ...ನಿಮ್ಮ ಅನಿಸಿಕೇ ಹೇಳೋದೆ ಹೇಳ್ತೀರಂತೆ..ಎದ್ಯಾಕೆ ಕದ್ದುಮುಚ್ಚಿ (ಅನಾನಿ"ಮೋಶನ್") ಹೇಳ್ತೀರಿ..ಯಾಕೆ ಭಯ ನ?

ಚೇತನ ಅವರ ಪ್ರಶ್ನೆಗೆ ಏನ್ ಅಂತ ಉತ್ರ ಕೊಡ್ತೀರಿ ಮಿಸ್ಟರ್ ಅನಾನಿ ಮೋಷನ್?


ಪಾಪ ಬೆಳಗೆರೆಯ ತಪ್ಪುಗಳನ್ನ ಹುಡುಕೋ ಅವಸರದಲ್ಲಿ ನಿಮಗೆ ಹೀಗನ್ನಿಸಿರಬೇಕು..ರವಿ ಹೇಳೀದ್ದು ಎಲ್ಲ ಪತ್ರಕರ್ತರನ್ನ ಉದ್ದೇಶಿಸಿಯೇ ವಿನಹ ಬೇರೇನು ಇಲ್ಲ...ಏನೊಪ ನಮಗೆ ಅಲ್ಲಿ ಕುಳಿತು ಅವರೂ ಮಾತಡಿದ್ದನ್ನ ಕೇಳಿಸಿಕೊಂಡಿದ್ದೀವಿ..ಅದಕ್ಕೆ ಬರೆಯಬೇಕು ಅನ್ನಿಸಿತು ಬರೆದೆ...ಇಲ್ಲಿರುವ ಬೆಳಗೆರೆಯ ಹಾರ್ಡ್ಕೋಡು ದ್ವೇಶಿಗಳಿಗೆ ಈ ಕಾಮೆಂಟಿದ ಸಕತ್ ಬೇಜಾರ್ ಅದ್ರೆ ನಾನ್ ಹೊಣೆ ಅಲ್ಲಪ್ಪ...

ಒಂದು ವೇಳೆ ನಿಮ್ಮ ಈ ಅದ್ಭುತ ಪೋಸ್ಟ್ ನಿಜಾನೆ ಆಗಿದ್ರೆ ಸಮಸ್ತ ಕರ್ನಾಟಕದ ಪತ್ರಕರ್ತರು ಸುಮ್ಮನೆ ಬಿಡುತಿದ್ದರ ಬೆಳಗೆರೆಯನ್ನ? ಕಲ್ಪನೆ ಮಾಡಿಕೊಳ್ಳೊಕು ಬಯವಾಗುತಿದೆ...

ಹೌದು ಕನ್ನಡಪ್ರಭ ಎಂಬ ಪತ್ರಿಕೆಯಲ್ಲಿ ಈ ವಿಷಯದ ಬಗ್ಗೆ ಎಷ್ಟು ಪೇಜ್ ಬಂದಿದೆ? ಎಷ್ಟ್ ಪೇಜ್ ಬರ್ದಿದ್ದೀರಿ?

Anonymous said...

ಅದೇನೊಪ..೧೦ ವರ್ಷದ ಹಿಂದೆ ನಡೆದ ಘಟನೆಯನ್ನ ಇಲ್ಲಿವರೆಗೂ ಕಾರಿಕೊಳ್ಳುತ್ತಿದ್ದೀರಿ..ಅದನ್ನ ರೂಪಿಣಿ ಮರೆತು ಯೆಷ್ಟ್ ವರ್‍ಶವಯಿತೊ..ಬೆಳಗೆರೆ ಕ್ಷಮೆ ಕೇಳಿ ಎಷ್ಟು ವರ್ಷವಯಿತೋ ..ಬೆಳಗೆರೆಯನ್ನ ಹಳಿಯಲಿಕ್ಕೆ ನಿಮಗೆ ಇರುವುದೊಂದೆ ಕಾರಣ ಬಿಡೀ ಒಂದು ಕ್ರೈಮ್ ನ್ಯೂಸ್ ಇನ್ನೊಂದು ಸತ್ತು ಸುಣ್ಣವದ ರೋಹಿಣಿ ಪ್ರಕರಣ..ಹೊಸ ಹೊಸದೇನಾದ್ರು ಹುಡುಕೋಕೆ ಅಗೋಲ್ವ?..?

Anonymous said...

ಪ್ರಿಯ ಚೇತನಾ
ಅನಂತಮೂರ್ತಿಯವರಿಗೆ ಜ್ಞಾನಪೀಠ ಸಿಕ್ಕ ಸರಿ ತಪ್ಪಿನ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಟೈಂಸ್ ಆಫ್ ಇಂಡಿಯಾ ಪತ್ರಿಕೆ ರೂಪಿಸಿರುವ ಟ್ರಸ್ಟ್ ನೀಡುವ ಪ್ರಶಸ್ತಿ ಅದು. ಅದಕ್ಕೇಕೆ ಅನಗತ್ಯ ಮಹತ್ವ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ಆದರೆ ಅನಂತಮೂರ್ತಿಯವರು ಸೃಷ್ಟಿಸಿದ ಸಾಹಿತ್ಯದ ಗುಣಮಟ್ಟದ ಬಗ್ಗೆ ಬರೆಯುವಾಗ ನೀವು ಸ್ವಲ್ಪ ಎಚ್ಚರದಿಂದ ಇರಬೇಕು ಅನ್ನಿಸುತ್ತದೆ. ಅವರ ರಾಜಕೀಯ ನಿಲುವಿನ ಬಗ್ಗೆ, ಸಾಹಿತ್ಯದ ಕುರಿತ ಅವರ ಅಭಿಪ್ರಾಯಗಳ ಬಗ್ಗೆ ಜಗಳವಾಡಬಹುದು. ಅವರು ಕೆಟ್ಟ ಕೃತಿಗಳನ್ನಂತೂ ಕನ್ನಡ ಸಾಹಿತ್ಯ ಜಗತ್ತಿಗೆ ಕೊಟ್ಟಿಲ್ಲ ಎಂಬುದು ನನ್ನ ಅನಿಸಿಕೆ.
-ಕೃಷ್ಣಮೂರ್ತಿ ಸಾಗರ

Anonymous said...

ಕೃಷ್ಣಮೂರ್ತಿಯವರಿಗೆ ನಮಸ್ತೇ
ಹೌದು. ಕೆಲವೊಮ್ಮೆ ಹಾಗಾಗಿಬಿಡುತ್ತದೆ. ಅನಂತ ಮೂರ್ತಿ ನಾನು ಬಹಳ ಇಷ್ಟಪಡುವ ವ್ಯಕ್ತಿ. ಅದಕ್ಕೇನೆ ಅವರೊಟ್ಟಿಗೆ ಯಾವಾಗಲೂ ನನಗೆ ಜಗಳ. ಅವರು ತೀರಾ ಕೆಟ್ಟ ಕೃತಿಗಳನ್ನು ಹೊಗಳಿ ಮಾತಾಡೋದನ್ನೂ ನಾನು ನೋಡಿದ್ದೇನೆ. ಪ್ರಸಿದ್ಧ ಕವಿಗಳನ್ನು ಸಿಕ್ಕಾಪಟ್ಟೆ ಬಯ್ದುಕೊಳ್ಳೋದನ್ನೂ ನೋಡಿದ್ದೇನೆ. ಅದೊಂದು ಸಾಹಿತ್ಯಕ ಚರ್ಚೆಯ ವಾತಾವರಣವಾಗಿದ್ದಾಗೆ ಅವೆಲ್ಲ ಸರಿ. ಆದರೆ ಅರ್ಥಾರ್ಥ ಸಂಬಂಧವಿಲ್ಲದೆಡೆಯೂ ಅಂತಹ ಮಾತುಗಳನ್ನು ಕೇಳಿದ್ದೇನೆ.
ಅನಂತ ಮೂರ್ತಿಯವರ ಸಾಹಿತ್ಯದ ಬಗ್ಗೆ ಮಾತಾಡುವ ಬೇಸಿಕ್ ಅರ್ಹತೆ ನನಗಿಲ್ಲ ಅನ್ನೋದು ನಿಜ. ನಾನು ಯಾವತ್ತೂ ಸಾಹಿತ್ಯದ ವಿದ್ಯಾರ್ಥಿನಿಯಾಗಿರಲಿಲ್ಲ. ಆದರೆ, ನಾನೊಬ್ಬ ಸೀರಿಯಸ್ ಆದ ಓದುಗಳಂತೂ ಹೌದು. ಒಬ್ಬ ಓದುಗಳಾಗಿ ನನಗೆ ಅನಂತ ಮೂರ್ತಿ ಅತ್ಯದ್ಭುತವಾದದ್ದೇನೋ ಕೊಟ್ಟಿದ್ದಾರೆ ಎಂದು ಯಾವತ್ತಿಗೂ ಅನಿಸಿಲ್ಲ. ಇದು ಬಹುತೇಕರ ಅಭಿಪ್ರಾಯವೂ ಹೌದೆಂದುಕೊಳ್ಳುವೆ. ಅವರು ಕೆಟ್ಟ ಕೃತಿ ನೀಡಿಲ್ಲ ಅನ್ನೋದನ್ನ ನಾನು ಖಂಡಿತ ಒಪ್ಪಿಕೊಳ್ಳುವೆ.

ನೀವು ಹೇಳಿದಂತೆ, ಜ್ಞಾನ ಪೀಠ ಪ್ರಶಸ್ತಿಗೆ ಮಹತ್ವ ಕೊಡುವುದರಲ್ಲಿ ಅರ್ಥವಿಲ್ಲ ಎಂದು ಇಂದಿನಿಂದ ಒಪ್ಪಲಾರಂಭಿಸುತ್ತೇನೆ. ಧನ್ಯವಾದ.

ವಂದೇ,
ಚೇತನಾ ತೀರ್ಥಹಳ್ಳಿ