ಊರಿನಲ್ಲಿ ನನ್ನ ತಾಯಿವರ ಅಕ್ಕ ಮತ್ತು ಅಣ್ಣರ ರೈತಾಪಿ ಕುಟುಂಬಗಳು ಇವೆ. ನನ್ನ ದೊಡ್ಡಮ್ಮನವರ ಐದು ಜನ ಗಂಡು ಮಕ್ಕಳಲ್ಲಿ ಇಬ್ಬರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಇವರಲ್ಲಿ ದೊಡ್ಡವರ ಹೆಸರು ತಿಪ್ಪೇಸ್ವಾಮಿ. ಮನೆಯಲೆಲ್ಲರೂ ತಮ್ಮಣ್ಣ ಎಂದುಕರೆಯುತ್ತಾರೆ. ಈತ ಮಾದರಿ ಕೃಷಿಕ. ನಾವು ಊರಿಗೆ ಹೋದಾಗ ತನ್ನ ನಾಲ್ಕು ಎಕರೆ ನೀರಾವರಿಯಲ್ಲಿ ಮೆಣಸಿನ ಸಸಿಗಳಿಗೆ ನೀರುಣಿಸುತ್ತಿದ್ದರು. ಈವರ ಅಚ್ಚುಕಟ್ಟಾದ ಕೆಲಸಕ್ಕೆ ನಳನಳಿಸುತ್ತಿದ್ದ ಸಸಿಗಳೇ ಸಾಕ್ಷಿಯಾಗಿದ್ದವು. ಎಂಟು ದಿನಗಳ ಹಿಂದೆ ಇದೇ ಜಮೀನಿಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕಿತ್ತು ಮನೆಯ ಹಿತ್ತಲಿನ ಕಣದಲ್ಲಿ ಒಣಹಾಕಿದ್ದರು. ಈ ಬಾರಿ ಈರುಳ್ಳಿಗೆ ಉತ್ತಮ ಬೆಲೆಯಿದೆ. ಆದರೆ ಬೆಳೆ ಸರಿಯಾಗಿ ಕೈಗೆ ಬಂದಂತ ಸಮಯದಲ್ಲಿ ಮಳೆ ಸುರಿದು ಬೆಳೆ ಕೊಳೆಯಲು ಶುರುವಾಗಿದೆ. ಪಕ್ಕದ ಜಮೀನಿನವರು ಬೆಳೆದಿದ್ದ ಬೆಳೆಯ ಅರ್ಧದಷ್ಟನ್ನು ತಿಪ್ಪೆಗೆ ಸುರಿದಿದ್ದಾರೆ.
ನೆಲದಿಂದ ಕಿತ್ತ ನಂತರ ಇದರ ಸಂಸ್ಕರಣೆಯದೇ ದೊಡ್ಡ ತಲೆನೋವು. ನನ್ನ ಅಣ್ಣನಿಗೆ ಇದರದೇ ಚಿಂತೆ. ಇನ್ನೆರಡು ದಿನಗಳಲ್ಲಿ ಬೆಳೆಯನ್ನು ಮಾರ್ಕೆಟ್ ಗೆ ಸಾಗಿಸಬೇಕು. ಬೆಂಗಳೂರೇ ಈರುಳ್ಳಿಯ ಮುಖ್ಯ ಮಾರಾಟ ಕೇಂದ್ರ. ಈರುಳ್ಳಿ ಬೆಳೆಯಲು ತಗಲುವ ವೆಚ್ಚವನ್ನು ಮತ್ತೊಬ್ಬ ಸಹೋದರ ಶ್ರೀನಿವಾಸ ವಿವರಿಸುತ್ತಿದ್ದ. ಒಬ್ಬ ರೈತ ಈ ಭಾಗದಲ್ಲಿ ಒಂದು ಎಕರೆಗೆ ಸರಾಸರಿ ಇನ್ನೂರು ಪ್ಯಾಕೇಟ್ (ಪ್ಯಾಕೆಟ್ ಅಂದರೆ ಸುಮಾರು 50ರಿಂದ 55 ಕೆಜಿ.ಯ ಚೀಲ) ಈರುಳ್ಳಿ ಬೆಳೆದಿದ್ದಾನೆ. ಅದರಲ್ಲಿ ಅವನ ಕೈಗೆ ಸಿಕ್ಕಿರುವುದು ಅರ್ಧ ಬೆಳೆ ಮಾತ್ರ. ಅಂದರೆ ನೂರು ಪ್ಯಾಕೇಟ್. ಒಂದು ಪ್ಯಾಕೇಟ್ ಈರುಳ್ಳಿಗೆ, ಬೀಜ ಗೊಬ್ಬರದ ವೆಚ್ಚ 25 ರು., ಬಿತ್ತನೆ, ಕಳೆ ತೆಗೆಯಲು, ಮತ್ತು ಕೀಳಲು ಕೂಲಿ ವೆಚ್ಚ 40 ರು., ಸಂಸ್ಕರಣೆಗೆ 25ರು., ಹೊಸ ಚೀಲದ ಬೆಲೆ 15ರು., ಸಾಗಣೆ ವೆಚ್ಚ 30 ರು., ಒಟ್ಟು ಅವನಿಗೆ ತಗಲಿರುವ ವೆಚ್ಚ 135ರುಪಾಯಿಗಳು. ಈಗ ಒಂದು ಪ್ಯಾಕೇಟ್ ಗೆ ಮಾರುಕಟ್ಟೆಯಲ್ಲಿ 200 ರುಪಾಯಿ. ಎಲ್ಲ ಕೂಡಿಕಳೆದ ನಂತರ ಅವನು ಪಟ್ಟ ಶ್ರಮಕ್ಕೆ ಸಿಕ್ಕುವ ಬೆಲೆ 65 ರುಪಾಯಿ.
ಇದನ್ನೆಲ್ಲ ಯೋಚಿಸುತ್ತಾ ಮನೆಗೆ ಮರಳಿದಾಗ ಅತ್ತಿಗೆ ಗಂಗಕ್ಕ ಕೊಟ್ಟ ಕಲ್ಲುಪ್ಪುಬೆರೆಸಿದ ಮಜ್ಜಿಗೆಯ ತಂಬಿಗೆಯನ್ನು ಕ್ಷಣಮಾತ್ರದಲ್ಲಿ ಕುಡಿದು ಯೋಗಕ್ಷೇಮ ವಿಚಾರಿಸುತ್ತ ಕುಳಿತೆ. ನಮ್ಮ ದೊಡ್ಡಮ್ಮನವರದು ತುಂಬು ಸಂಸಾರ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಐದು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿ ಎಲ್ಲರಿಗೂ ಮದುವೆ ಮಾಡಿ ನೆಮ್ಮದಿಯ ಜೀವನ ನಡೆಸುತಿದ್ದಾರೆ. ಈಗ ಇವರದು ಅವರ ಊರಿನಲ್ಲಿ ಉತ್ತಮ ಸ್ಥಿತಿಯಲ್ಲಿರುವ ಹೆಸರಾಂತ ಮನೆತನ.
ದೊಡ್ಡಮ್ಮ ಬೆಳಗಿನ ಉಪಹಾರಕ್ಕೆ ಹಿಂದಿನ ದಿನ ಕರುಹಾಕಿದ್ದ ಎಮ್ಮೆಯ ಮೊದಲ ಹಾಲಿನಿಂದ ಮಾಡಿದ ಗಟ್ಟಿ ಗಿಣ್ಣು ತಿನ್ನಲು ಕೊಟ್ಟರು. ನಮ್ಮ ಕಡೆ ಹಸುವಿನ ಹಾಲಿಗಿಂತ ಎಮ್ಮೆಯ ಹಾಲೇ ಶ್ರೇಷ್ಠ. ಎಮ್ಮೆಯ ಹಾಲು ಹಸುವಿನ ಹಾಲಿಗಿಂತ ಗಟ್ಟಿ ಮತ್ತು ಕೊಬ್ಬಿನಾಂಶ ಹೆಚ್ಚು. ಹಿಂದಿನ ದಿನ ಕರು ಹಾಕಿದ್ದ ಎಮ್ಮೆ ಬರೀ ಮೂರು ವರ್ಷದ ಪ್ರಾಯದ್ದು. ಅದರ ಮೊಲೆಗಳು ಚಿಕ್ಕದೆಂದು, ಹಾಲು ಕರೆಯಲು ಕಷ್ಟವಾಗುತ್ತಿದೆ, ಅಲ್ಲದೆ ಅದು ಗಂಡುಕೋಣಕ್ಕೆ ಜನ್ಮ ನೀಡಿದೆ ಎಂಬುದು ನನ್ನ ದೊಡ್ಡಮ್ಮನವರ ಕೊರಗು. ಈ ಎಮ್ಮೆಗಳಲ್ಲಿ ಗಂಡಿಗೆಮಹತ್ವವಿಲ್ಲ. ಕೋಣ ಸಾಕಲು ಹೊರೆ ಬೇರೆ. ಅದೇ ಹೆಣ್ಣು ಮರಿಗೆ ಜನ್ಮ ನೀಡಿದರೆ ಮುಂದೆ ಸಂಸಾರಕ್ಕೆ ಸಾಕಾಗುವಷ್ಟು ಹಾಲು ನೀಡುತ್ತದೆ. ಗಂಡು ಮರಿಗಳನ್ನು ಐದೂ ನೂರೋ ಸಾವಿರಕ್ಕೊ ಹರಿಜನರ ಕೇರಿಗೆ ತಳ್ಳಿ ಬಿಡುತ್ತಾರೆ.
ಈ ಗಿಣ್ಣು ವಿಶಿಷ್ಟವಾದ ಖಾದ್ಯ. ಇದು ಎಮ್ಮೆ ಕರು ಹಾಕಿದ ಕೆಲವೇ ಗಂಟೆಗಳಲ್ಲಿ ಕರೆದು ಸಂಗ್ರಹ ಮಾಡಿ ಇಡುತ್ತಾರೆ. ಅದರಲ್ಲಿ ಸ್ವಲ್ಪ ಬೆಲ್ಲ ಮತ್ತು ಒಂದು ಅಳತೆಗೆ ಮೂರರಷ್ಟು ಕೆನೆ ಹಾಲನ್ನು ಬೆರೆಸಿ, ಸ್ವಲ್ಪ ಏಲಕ್ಕಿ ಒಣ ಶುಂಠಿ ಹಾಕಿ ಒಲೆ ಮೇಲಿಟ್ಟರೆ ಚಾಕುವಿನಿಂದ ಸ್ಲೈಸ್ ಮಾಡಬಹುದಾದಂತ ಗಟ್ಟಿ ಗಿಣ್ಣು ರೆಡಿಯಾಗುತ್ತದೆ. ಇದು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಅಪರೂಪಕ್ಕೆ ಮಾತ್ರ ಸಿಗುವಂತದ್ದು. ನನ್ನ ದೊಡ್ಡಮ್ಮನವರ ಮನೆಯಲ್ಲಿ ಸುಮಾರು ಮೂರ್ನಾಲ್ಕು ಕರೆಯುವ ಎಮ್ಮೆಗಳಿವೆ. ದಿನಕ್ಕೆ ಕಡೆಪಕ್ಷ ಐದಾರು ಲೀಟರ್ ಹಾಲು ಕೊಡುತ್ತವೆ. ನಮ್ಮ ಸಂಬಂಧಿಗಳಿಗೆಲ್ಲ ಇವರ ಮನೆಯಿಂದಲೇ ಬೆಣ್ಣೆ ಸರಬರಾಜಾಗುವುದು.
ಮಧ್ಯಾಹ್ನ ಬಿಸಿ ಜೋಳದ ಮುದ್ದೆ ಸೊಪ್ಪಿನ ಉದುಕ ಊಟಮಾಡಿ ಮರಳಿ ದುರ್ಗಕ್ಕೆ ಬಂದಾಗ ಮೈಯಲ್ಲ ಚೈತನ್ಯದಿಂದ ಕಂಪಿಸುತ್ತಿತ್ತು.
15 comments:
very cool.
very nice! hahahahaha
wow, very special, i like it.
Very good......
help me.
very cool.
im here because of few cents for you. just dropping by.
what happened to the other one?
haha.
thats amazing story.
ಬರವಣಿಗೆ ಹಾಗೂ ಅನುಭವ ಚೆನ್ನಾಗಿದೆ. keep it up !
ಶಿವು.ಕೆ
ಸ್ವಾಮಿ,
ಹಳ್ಳಿಹಾಡಿನಲ್ಲಿ ನೋವು ನಲಿವು ಎರಡೂ ಸಮ್ಮಿಳಿತಗೊಂಡಿದೆ...ಬೆಳೆ ನಷ್ಟ ಅಂತೂ ನಮ್ಮ ಕೃಷಿಕರಿಗೆ ಯಾವಾಗಲೂ ಶಾಪವೇ
loo Swamy...
Hotte Huristiyalloo...
Thank u...
ಕಳೆದುದು ಸಿಕ್ಕಿದೆ
ಅಕ್ಟೋಬರ್ ಎರಡರಂದು ಕಾಣೆಯಾಗಿದ್ದ ಮಂಜುನಾಥ ಸ್ವಾಮಿ ಎಂಬ ಬಾಲಕ ಮತ್ತೆ 'ಹಳ್ಳಿ ಕನ್ನಡ' ಮನೆಗೆ ಮರಳಿದ್ದಾನೆ. ಈತನ ಇರುವಿನ ಬಗ್ಗೆ ಮಾಹಿತಿ ನೀಡಿದ ತಿಪ್ಪೇಸ್ವಾಮಿ ಅವರಿಗೆ ಧನ್ಯವಾದಗಳು
-ಜಿ ಎನ್ ಮೋಹನ್
thanks to Manju for the story. But, it is distrubing to know still that the hurdles that a farmer goes through in yeilding the crop in dryland area. Its really a Hurculean task for them. Any way, we at least hope that farmers who always in trouble in one or the other way, to smile in this year in Chitradurga and such dry land areas.
Post a Comment