ಯಾವುದು ಮತಾಂತರ,
ಯಾರು ಮತಾಂತರಿ?
ತಮ್ಮ ಮುಖವನ್ನು ಕನ್ನಡಿಯಲ್ಲಿ
ನೋಡುವುದನ್ನು
ಮುಖ್ಯಮಂತ್ರಿ ಯಡಿಯೂರಪ್ಪ
ಬಿಟ್ಟಿರುವಂತೆ ಕಾಣುತ್ತದೆ.
12ನೆಯ ಶತಮಾನದಲ್ಲಿ
ಆದದ್ದು ಏನು ಎಂಬುದನ್ನು
ಯಡಿಯೂರಪ್ಪ ತಿಳಿದಿಲ್ಲವೆಂದು
ನಂಬುವುದು ಕಷ್ಟ.
ತಮ್ಮ ಜನ್ಮದ ಬೇರು
ಎಲ್ಲಿದೆ ಎನ್ನುವುದನ್ನು
ಅವರು ಮರೆಯಬಾರದಲ್ಲವೇ?
ವಿದ್ವಾಂಸ ಡಾ.ಎಂ. ಚಿದಾನಂದ ಮೂರ್ತಿಯವರನ್ನಾದರೂ
ಕೇಳಿ ತಿಳಿದುಕೊಳ್ಳಬಹುದು.
ಮೂರ್ತಿಯವರೂ ಒಮ್ಮೆ ತಮ್ಮ ಬೆನ್ನನ್ನು ನೋಡಿ ನಂತರ
ವಾಸ್ತವಾಂಶ ತಿಳಸಬಹದು!
- ಕೆ.ಎನ್. ರಾಮಮೂರ್ತಿ
(ಕೃಪೆ: ವಾಚಕರವಾಣಿ)
6 comments:
thats amazing story.
very nice! hahahahaha
when will you go online?
i think you add more info about it.
ಮಂಜುನಾಥ ಸ್ವಾಮಿಯವರೆ,
ಈ ಪುಟ್ಟ ಕವಿತೆಯನ್ನು ಯಡಿಯೂರಪ್ಪನವರು ಹತ್ತು ಸಾರಿ ಓದಿಕೊಳ್ಳಲಿ.
ತಮ್ಮನ್ನು ತಾವು ವಚನ ಪರಂಪರೆಯಿಂದ ಬಂದವರು ಎಂದು ಹೇಳಿಕೊಳ್ಳುವ ಯಡಿಯೂರಪ್ಪನವರು ತಮ್ಮ ಮೂಲವನ್ನು ಒಮ್ಮೆ ಸರಿಯಾಗಿ ಗಮನಿಸಿ ನೋಡುವುದು ಒಳ್ಳೆಯದು.
ಇವತ್ತು (೨೧-೯-೨೦೦೮) ಬೆಂಗಳೂರಿನಲ್ಲೂ ಚರ್ಚ್‌ಗಳ ಮೇಲೆ ದಾಳಿ ನಡೆದಿವೆ. ಸ್ವತಃ ಮುಖ್ಯಮಂತ್ರಿಗಳೇ ಪೊಲೀಸ್ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.
ಆದರೆ ಇಷ್ಟು ದಿನ ಯಡಿಯೂರಪ್ಪ ಮಾಡಿದ್ದೇನು? ಮಂಗಳೂರಿನಲ್ಲಿ ಘಟನೆಗಳು ನಡೆದಾಗ ಯಡಿಯೂರಪ್ಪ ಮುಖ್ಯಮಂತ್ರಿಯಂತೆ ವರ್ತಿಸದೆ ಪ್ರತಿಪಕ್ಷ ನಾಯಕನಂತೆ ವರ್ತಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ರಾಜ್ಯದ ಪ್ರತಿಯೊಬ್ಬ ಪ್ರಜೆಯನ್ನೂ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ರಕ್ಷಣೆ ನೀಡುವ ಪ್ರಮಾಣವಚನ ಸ್ವೀಕರಿಸಿದ್ದರು ಎಂಬುದನ್ನು ಅವರೇ ಮರೆತಿದ್ದರು.
ಕೇಂದ್ರ ಸರ್ಕಾರ ಹೆದರಿಸಿದ ಮೇಲೆ ಯಡಿಯೂರಪ್ಪ ಅವರಿಗೆ ಒಮ್ಮೆಗೇ ಜ್ಞಾನೋದಯವಾದಂತಿದೆ.
ಪ್ರತಿಯೊಬ್ಬ ಪ್ರಜೆಯನ್ನೂ ಜಾತಿ, ಧರ್ಮ, ವರ್ಗದ ಭೇದವಿಲ್ಲದೆ ರಕ್ಷಣೆ ನೀಡುವುದು ಅನ್ನುವುದು ಹಿಂದೂ ಧರ್ಮವನ್ನ ಬೇರೇ ಧರ್ಮದವರ ಪದದಡಿಯಲ್ಲಿ ರಂಗೋಲಿ ಇಡುವುದು ಅಂತಾ ನ ಅರ್ಥ?
Post a Comment