Sunday, July 27, 2008

ಮಾಡೋದೆಲ್ಲ ಅನಾಚಾರ, ಮನೆಮುಂದೆ ಬೃಂದಾವನಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಕಂಡ ಕಂಡ ದೇವಸ್ಥಾನಗಳಿಗೆ ಹೋಗಿ ತನ್ನ ಸರಕಾರದ ಪರವಾಗಿ ದೇವರಲ್ಲಿ ಹರಕೆ ಹೊರುತ್ತಿದ್ದಾರೆ. ಕಾರಣ ಮಳೆ ಬರಲಿ ಎಂದು. ತಮಾಷೆಯೋ, ವಿಪರ್ಯಾಸವೋ ಮುಖ್ಯಮಂತ್ರಿಗಳ ಸರ್ಕಾರದ ಡಜನ್ ಮಂತ್ರಿಗಳು ಮಾಡುತ್ತಿರುವ 'ಲೋಕೋದ್ದಾರ' ಕಾರ್ಯ ಮಾತ್ರ ಕಣ್ಣಿಗೆ ಬಿದ್ದೇ ಇಲ್ಲ ಎನ್ನುವ ಹಾಗಿದೆ. ಮಳೆ ಬರಬೇಕಂದ್ರೆ ಕಾಡಿರಬೇಕು. ಪರಿಸರ ಚೆನ್ನಾಗಿರಬೇಕು. ಇದನ್ನು ನಾಲ್ಕನೇ ಕ್ಲಾಸಿನ ವಿದ್ಯಾರ್ಥಿ ಬೇಕಾದ್ರೂ ಕಾರಣ ಸಹಿತ ವಿವರಿಸ್ತಾನೆ. ಆದರೆ ಗಣಿ ಧಣಿಗಳು ಮಾಡುತ್ತಿರುವ ಕೆಲಸವೇನು? ಕಾಡನ್ನು ಅಡ್ಡಡ್ಡ ಸೀಳಿ, ನೆಲವನ್ನು ಅಗೆಯುತ್ತಿದ್ದಾರೆ. ಇಂಥದ್ದನ್ನು ಬಗಲಲ್ಲಿ ಕಟ್ಟಿಕೊಂಡು ಕಂಡ ದೇವರ ಮುಂದೆ ಕೈಮುಗಿದರೆ ಸಿಗುವುದಾದರು ಏನು? ಮುಖ್ಯಮಂತ್ರಿಗಳು 'ನಾನೇನು ಪಾಪ ಮಾಡಿಲ್ಲ' ಅಂತಾ ಶುದ್ಧ ಹಸ್ತರ ಹಾಗೆ ಮಾತಾಡುತ್ತಾ ತಿರುಗುತ್ತಿದ್ದಾರೆ. ಇಷ್ಟಕ್ಕೆಲ್ಲಾ ಒಲಿಯುವುದಕ್ಕೆ ವರುಣ ಯಡಿಯೂರಪ್ಪ ಕೊಂಡು ತಂದ ಶಾಸಕರೇ?

5 comments:

Anonymous said...

good comment.
-jogi

VENU VINOD said...

ಇಷ್ಟಕ್ಕೆಲ್ಲಾ ಒಲಿಯುವುದಕ್ಕೆ ವರುಣ ಯಡಿಯೂರಪ್ಪ ಕೊಂಡು ತಂದ ಶಾಸಕರೇ?

ಸರಿಯಾಗಿ ಹೇಳಿದ್ದೀರಿ.
ಕರಾವಳಿಯಲ್ಲಿ ನಮಗೆ ಅದಿರು ಸಾಗಾಟದ ಲಾರಿಗಳಿಂದ ಮುಕ್ತಿಯಿಲ್ಲ. ಈ ಸರ್ಕಾರದಿಂದ ಗಣಿದೊರೆಗಳಿಗೆ ಅಭಯಹಸ್ತ.

Anonymous said...

I found this bulb on one of my field trips in the nearby bush. They are huge! The locals use it in folk medicine. The bulb is cut into slices and dried.

Anonymous said...

Diyah Rumpinuji dari SMA Ngraho.

Anonymous said...

v